Skip to main content

Posts

Featured

ಸಮನ್ವಯ ಶಿಕ್ಷಣದ ಹರಿಕಾರ: ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರ್ (ನ. ಮ)

ಎರಡನೇ ಪೊನ್ನಾನಿ ಎಂದು ಖ್ಯಾತಿ ಇರುವ ನಾದಾಪುರಂ ಈ ಹೆಸರು ಪಡೆಯಲು ಮುಖ್ಯಪಾತ್ರ ವಹಿಸಿದ್ದು ಸಮೀಪ ಪ್ರದೇಶವಾದ ಕಡಮೇರಿ. ಇದು ಹತ್ತಾರು ಉಲಮಾ ಕುಟುಂಬಂಗಳ ತವರೂರು. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಒಂದೇ ಸೂರಿನಡಿ ನೀಡುವ ಕೇರಳದ ಪ್ರಥಮ ವಿದ್ಯಾಲಯ ರಹ್ಮಾನಿಯ್ಯದ ಮೂಲಕ ಖ್ಯಾತಿವೆತ್ತ ಗ್ರಾಮ. ಹಿಂದಿನ ಸೂಕ್ಷ್ಮಶಾಲಿಗಳಾದ ಉಲಮಾ ದಿಗ್ಗಜರಿಂದ ಉಂಟಾದ ಹಿರಿಮೆ ಮತ್ತು ಘನತೆಯನ್ನು ಇನ್ನೂ ಆ ಪ್ರದೇಶದಲ್ಲಿ ಉಳಿಸಲು ರಹ್ಮಾನಿಯ್ಯಃ ಕಾರಣವಾಯಿತು‌. ಈ ಸಂಸ್ಥೆಯ ಶಿಲ್ಪಿಯೇ ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರ್ ಎಂಬ ಸಾತ್ವಿಕ ಸೂಫೀ ನೇತಾರ. 'ಚೀಕಿಲೋಟೋರ್' ಎಂಬ ನಾಮದಲ್ಲಿ ಪ್ರಸಿದ್ಧಿ ಹೊಂದಿದ್ದ ಚೀಕಿಲೋಟ್ ಕುಂಞಬ್ದುಲ್ಲ ಮುಸ್ಲಿಯಾರ್ ಹಾಗೂ ಬಿಯ್ಯಾತು ದಂಪತಿಗಳ ಎಂಟು ಮಕ್ಕಳಲ್ಲಿ ಏಕ ಪುತ್ರನಾಗಿದ್ದರು 'ರಹ್ಮಾನಿಯ್ಯಃ' ಸ್ಥಾಪಕ ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರ್. 1925 ಫೆಬ್ರವರಿ 20 ರಂದು ಚೀಕಿಲೋಟ್ ಮನೆತನದಲ್ಲಿ ಇವರು ಜನ್ಮ ತಾಳಿದರು. ಕುಂಞಮ್ಮದ್ ಮುಸ್ಲಿಯಾರರು ಅರಿವಿನ ವಿಶಾಲ ಆಕಾಶವೇನೂ ಕಂಡವರಲ್ಲ. ಆದರೂ ನಿಷ್ಕಲ್ಮಶ ಕರ್ಮಗಳಿಂದ ಅರಿವನ್ನು ಜೀವನದೊಂದಿಗೆ ಹೊಂದಿಸಲು ಯಶಸ್ವಿಯಾದ ಸಾತ್ವಿಕರು ಅವರು. ಪ್ರಾಥಮಿಕ ಕಲಿಕೆಯ ನಂತರ ತಂದೆಯ ಸಹೋದರ ಚಿರಕ್ಕಲ್ ಅಬ್ದುರ್ರಹ್ಮಾನ್ ಮುಸ್ಲಿಯಾರರ ವಿಲ್ಯಾಪಳ್ಳಿ, ತಳಿಪ್ಪರಂಬ್ ದರ್ಸುಗಳಲ್ಲಿ ವಿದ್ಯಾರ್ಜನೆಗೈದರು. ನಂತರ ಮಲಪ್ಪುರಂ ಜಿಲ್ಲೆಯ ವೇಂಙರ ಸಮೀಪದ ಕೋಟು...

Latest posts

ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್

ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು

ಇದು ಸ್ವಯಂ ಅವಲೋಕನದ ಕಾಲ

ಇಸ್ತಿಗ್ಫಾರಿನ ಶಕ್ತಿ

ದಂತ ಶುಚೀಕರಣೆ

ಇನ್ನಾದರೂ ಬದಲಾಗಬಾರದೇಕೆ??

My Students Blog Address

ಕಾಲೇಜಿನಂಗಳದ ಪ್ರೇಮಾವಲೋಕನ

جشنِ میلاد النبی کیوں مناتے ہیں..؟

Hashim Rahmani Salmara