ಕಾಲೇಜಿನಂಗಳದ ಪ್ರೇಮಾವಲೋಕನ

ಹೈಸ್ಕೂಲ್ ಅಂಗಳದ ಮರದಡಿಯಲ್ಲಿ ಅವರು ಎಂದಿನಂತೆ ಮಧ್ಯಾಹ್ನ ಊಟಕ್ಕೆ ಕುಳಿತಾಗ ಕತೆಗಳು ಹೇಳತೊಡದಿದರು. ಪ್ರೇಮ ಕ್ಯಾಂಪಸಿನ ಒಂದು ಫ್ಯಾಶನೇ ಆಗಿ ಬಿಟ್ಟಿದ್ದರಿಂದ ಎಲ್ಲರ ಚರ್ಚಾ ವಿಷಯವೂ ಅದೇ ಆಗಿತ್ತು. ಜೀವನಕ್ಕೆ ಒಂದು ಅರ್ಥ ಬೇಕಿದ್ದರೆ ಪ್ರೇಮಿಸಬೇಕಂದು ಕೆಲವರು. ಲೈಫ್ ಎಂಜಾಯ್ಮೆಂಟ್ ಮಾಡಲು ಒಂದು ಬಾಯ್ ಫ್ರೆಂಡ್ ಮಸ್ಚ್ ಎಂದರು ಇನ್ನು ಕೆಲವರು. ತಮ್ಮನ್ನು ಅರ್ಥೈಸಿದ ಒಬ್ಬನನ್ನು ವಿವಾಹವಾಗಬೇಕಾದರೆ ಈಗಲೇ ಒಬ್ಬನನ್ನು ಪ್ರೀತಿಸಬೇಕೆಂಬುದು ಎಲ್ಲರ ಮಾತು. ಅದಾಗಲೇ ಶಾಹಿನ ಒಂದು ವಾಚನಾನುಭವ ತಿಳಿಸಿದಳು. ಕೆಲವು ವರ್ಷಗಳ ಮುಂಚೆ ಮಾಸಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಘಟನೆ. ದೀರ್ಘ ಕಾಲ ಪ್ರೇಮಿಸಿದ ಕಾಮುಕ ವಿವಾಹವಾಗಲು ಮುಂದಾದ ಘಟನೆ. ಅವರ ವಿವಾಹ ನಡೆಯಿತು. ಪ್ರೇಮ ಜೀವನದಲ್ಲಿ ಕಂಡ ಹೆಣ್ಣಲ್ಲ ಜೀವನದಲ್ಲಿ ಕಾಣುತ್ತಿರುವುದೆಂದು ಮನವರಿಕೆಯಾಗಲು ಅವನಿಗೆ ಹೆಚ್ಚು ತಾಳಬೇಕಾಗಿ ಬರಲಿಲ್ಲ. ಮಾತಾಪಿತರಿಗೆ ತಿಳಿಯದೆ ಕದ್ದು ತಂದ ಬಂಗಾರ, ಹಣ ಎಲ್ಲಾ ಖರ್ಚಾಗಿ ಮುಗಿಯುವಂತೆ ಅವಳೊಂದಿಗಿನ ಇಷ್ಟ ಅವನ ಮನಸ್ಸಲ್ಲಿ ಕುಂಟಿತಗೊಳ್ಳುತ್ತಿತ್ತು. ಅವಳ ದೇಹವನ್ನು ಹಲವರಿಗೆ ನೀಡುವುದಕ್ಕೂ ಅವನು ಹಿಂಜರಿಯಲಿಲ್ಲ. ಎಲ್ಲವೂ ನನ್ನ ಕಾಮುಕನ ಸಂತೋಷಕ್ಕಾಗಿಯೇ ಆಗಿದೆಯಲ್ಲಾ ಎಂದವಳು ಸಮಾಧಾನಪಟ್ಟುಕೊಂಡಳು. ಎಲ್ಲವನ್ನೂ ಸಹಿಸಿದಳು. ಕೊನೆಗೆ ಅವಳನ್ನು ವೇಶ್ಯಾಲಯಕ್ಕೆ ಒಪ್ಪಿಸಿ ಹಣ ಪಡೆದು ಎಣಿಸುತ್ತಿರುವುದು ಕಂಡು ಓಡಿ ಪರಾರಿಯಾದ ಮಹಿಳೆಯೋರ್ವಳ ಹೃದಯ ವಿದ್ರಾವಕ ಬರಹದ ಕುರಿತು ಶಾಹಿನಾ ಚರ್ಚೆ ಪ್ರಾರಂಭಿಸಿದಳು. ಪತ್ರಿಕೆಯಲ್ಲಿ ಬಂದ ಜೇವನಾನುಭವ ಅಲ್ಲಿ ಕೂಡಿದ್ದವರೆಲ್ಲರನ್ನೂ ನಿಬ್ಬೆರಗಾಗಿಸಿತು. ಆದರೂ ಸ್ವಯಂ ಸಮಾಧಾನಪಟ್ಟುಕೊಳ್ಳಲು ಮುಂದಾದರು ಕೆಲವರು. ಅದೆಲ್ಲಾ ಅಪರೂಪದ ಘಟನೆಗಳು. ನಾವು ಗಮನಿಸಿದರೆ ಸಾಲದೇ ಎಂದರು ಕೆಲವರು. ನಾನು ಪ್ರೀತಿಸುವ ಕಾಮುಕ ವಿಶ್ವಾಸ ಯೋಗ್ಯವೆಂದಳು ಆಯಿಶಾ. ಮೋಸ ಹೋಗುವುದೆಂದಾದರೆ ಸ್ವಯಂ ರಕ್ಷೆ ಹೊಂದಬಹುದೆಂದು ಫಿದಾ ಸ್ನೇಹಿತೆಯರಿಗೆ ಧೈರ್ಯ ತುಂಬಲು ಹೇಳಿದಳು. ತನ್ನ ಧೃಢತೆಯಿಂದ ದುರ್ಬಲ ಭಾವನೆಗಳಿಗೆ ಬಲಿಯಾಗದವಳು ಫಾತಿಮಾ. ಪ್ರೇಮಿಸುವ ಹುಡುಗ ಮೋಸ ಮಾಡಲು ಕಲಿತವನೇ ಆಗಿರುತ್ತಾನೆಂದು ಕಟುವಾಗಿ ಸ್ವಲ್ಪ ಜೋರಾಗಿಯೇ ಹೇಳಿಬಿಟ್ಟಳು ಅವಳು. ಸ್ತ್ರೀ-ಪುರುಷ ಸಂಬಂಧ ನಿಕಾಹಿನ ಮುಖಾಂತರ ಪ್ರಾರಂಭಿಸಬೇಕಾದದ್ದು, ಒಳಿತಿನಲ್ಲಿ ಪರಸ್ಪರ ಸಹಕರಿಸಿಯೂ ಆನಂದಿಸಿಯೂ ನೆಲೆನಿಲ್ಲಬೇಕಾದದ್ದು ಎಂದು ಅವಳು ಹೇಳಿದರೂ ಸ್ನೇಹಿತೆಯರಿಗೆ ಅದಷ್ಟು ಹಿಡಿಸಲಿಲ್ಲ. ಅವರು ಹೇಳಿದರು ನೀನೊಂದು ಮೊಯ್ಲಾರ್ಚ್ಚಿ...! ಫಾತಿಮಾಳ ಮಾತು ಸರಿಯೇ, ನಾವು ಮನವರಿಕೆ ಮಾಡಬೇಕಾದ ವಿಚಾರವದು. ಪ್ರೇಮಿಸಿ ಆತ್ಮಹತ್ಯೆ ಮಾಡುವವರಲ್ಲಿ ಸಿಂಹಪಾಲು ಮಹಿಳೆಯರು. ಅನಾಹುತಗಳನ್ನು ಆಹ್ವಾನಿಸುವವರು ನಾವೇ. ವಿವಾಹ ಮಾಡಿಸಿಕೊಡಲು ಹಠ ಹಿಡಿಯುವುದರಲ್ಲೂ ಮಹಿಳೆಯರೇ ಮುಂದು. ಯಾಕಾಗಿ ಈ ಹುಡುಗರು ಪ್ರೇಮ ಸಂಬಂಧವಾಗಿ ಹೆಚ್ಚು ಕಷ್ಟ ನಷ್ಟಗಳನ್ನು ಸಹಿಸಬೇಕಾಗುವುದಿಲ್ಲ?
ಎಲ್ಲರೂ ಚಿಂತಾಮಗ್ನರಾದರು. ಇದೆಲ್ಲಾ ಸರಿ ತಾನೇ. ಮೋಸ ಹೋಗುವ ಹುಡುಗಿಯರ ಬಗ್ಗೆ ಅವರು ಹೇಳತೊಡಗಿದರು. ಅವಿಶ್ವಾಸ ಪ್ರೇಮದ ಬಲೆಯಲ್ಲಿ ಸಿಲುಕಿಕೊಂಡವರು ಹಲವರು. ಮತ್ತೂ ಹಲವರು ಅಲ್ಪಕಾಲ ಕಾಮುಕನ ಜೊತೆ ಜೀವಿಸಿ ಕೊನೆಗೆ ತನ್ನ ಜೀವನ ಅಪಘಾತದ ಹಾದಿಯಲ್ಲಿದೆಯೆಂದರಿತು ಗತಿಯಿಲ್ಲದೆ ಆತ್ಮಹತ್ಯೆಯನ್ನು ಪರಿಹಾರವಾಗಿ ಆಯ್ಕೆ ಮಾಡುವವರು. ಮರಳಿ ಹೋದರೆ ಕುಟುಂಬ ತನ್ನನ್ನು ಸ್ವೀಕರಿಸಲಾರರೆಂಬ ಭಯದಿಂದ ಬೀದಿ ಬದಿಗಳಲ್ಲಿ ಕಾಲಕಳೆಯಲು ವಿಧಿಸಲ್ಪಟ್ಟವರೂ ಇದ್ದಾರೆ. ಯಾವತ್ತೂ ಬೇರ್ಪಡಲಾರೆವೆಂದು ಹಲವು ಬಾರಿ ಹೇಳಿ ವಿಶ್ವಾಸ ಪಡೆದ ಹಲವು ಕಾಮುಕರು ತನ್ನ ಪ್ರೇಯಸಿಯ ಮರಣ ಘಳಿಗೆಗಾಗಿ ಕಾದು ನಿಂತ ಅದೆಷ್ಟು ಘಟನೆಗಳು! ಹಲವರಿಗೆ ಹಲವು ಅನುಭವಗಳು. ಪತ್ರಿಕೆಗಳಿಂದಲೂ ನ್ಯೂಸ್ ಚ್ಯಾನೆಲ್ಗಳಿಂದಲೂ ತಿಳಿದ ವಿಚಾರಗಳನ್ನು ಒಬ್ಬೊಬ್ಬರೇ ಹೇಳಿದಾಗ ಭಾವನಾತ್ಮಕ ವಿಚಾರಗಳು ವಿವೇಕಕ್ಕೆ ದಾರಿ ಬಿಟ್ಟಿತು. ಆಮಿನಾ ಹೊಸದೊಂದು ನಿರ್ದೇಶ ಮುಂದಿಟ್ಟಳು. ನಮಗೆ ಹತ್ತು ಸ್ನೇಹಿತೆಯರು ಸೇರಿ ಪ್ರಮುಖ ಉಸ್ತಾದ್ ಓರ್ವರ ಬಳಿ ಹೋಗೋಣ. ನಿರಂತರ ನಮ್ಮಂತಹ ಹೆಣ್ಣು ಮಕ್ಕಳೊಂದಿಗೆ ಸಂವೇದಿಸಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಸೂಕ್ತವಾದ ಒಬ್ಬರನ್ನು ಕಂಡುಹಿಡಿಯೋಣ. ಅನ್ವೇಷಣದ ಅಂತ್ಯದಲ್ಲಿ ಪುತ್ತೂರು ನಗರದ ಸಮೀಪದಲ್ಲೇ ಒಂದು ವಿದ್ವಾಂಸರನ್ನು ಅವರು ಕಂಡುಹಿಡಿದರು. ನಮ್ಮಂತಹ ಹುಡುಗಿಯರಿಗೆ ಜೀವನದಲ್ಲಿ ಆವಶ್ಯಕವಾದ ಉುದೇಶಗಳು, ಸಲಹಾ ಸೂಚನೆಗಳು ಅವರಿಂದ ಪಡೆಯೋಣ ಎಂದೂ ಅವರ ಅನುಭವದಲ್ಲಿ ಅವರನ್ನು ಭೇಟಿಯಾದ ತರುಣಿಯರ ಪೋಸ್ಟೀವ್ ಮತ್ತು ನೆಗಟೀವ್ ಕೇಳಿದರೆ ಅವರು ಖಂಡಿತಾ ಸಹಾಯ ಮಾಡುವರೆಂದು ಖಚಿತಪಡಿಸಿದರು.
ಪೂರ್ವ ನಿಶ್ಚಯದಂತೆ ಆದಿತ್ಯವಾರದಂದು ಹತ್ತು ವಿದ್ಯಾರ್ಥಿನಿಯರು ಸೇರಿ ಗುರುವಿನ ಮನೆಯಾವರಣಕ್ಕೆ ತಲುಪಿದರು. ನವತಲೆಮಾರಿನ ಮನಸ್ಸು ಅರ್ಥೈಸಿದ ಗುರು ಅವರಿಗಾಗಿ ಒಂದು ಗಂಟೆ ಸಮಯ ಮೀಸಲಿಡಲು ಮುಂದಾದರು. ಆಗಲೇ ಬಂದಿದ್ದ ಕೆಲವರೊಂದಿಗೆ ಮಾತನಾಡಿದ ಬಳಿಕ, ಇನ್ನು ವಿದ್ಯಾರ್ಥಿನಿಯರ ಸರದಿ. ಆಕಾಂಕ್ಷೆ ಮತ್ತು ಕುತೂಹಲದಿಂದ ಅವರು ಒಳಗೆ ಪ್ರವೇಶಿಸಿದರು. ಪ್ರೇಮದ ಸತ್ಯಾವಸ್ಥೆ ಮತ್ತು ಗುಣದೋಷಗಳನ್ನು ಸಮನ್ವಯಿಸಿ ಗುರು ತನ್ನದೇ ಆದ ಶೈಲಿಯಲ್ಲಿ ವಿವರವಾಗಿ ಹೇಳಿದರು. ಕೇಳುವಿಕೆಯನ್ನೂ ದೃಷ್ಟಿಯನ್ನೂ ಸೂಕ್ಷಿಸಬೇಕೆಂಬ ಖುರ್ಆನ್ ವಚನ ಆಧರಿಸಿ ಗುರು ಹೇಳಿದರು. ಅಮಿತವಾಗಿ ಯಾರಿಗೂ ಕಿವಿಗೊಡಬಾರದು; ನೀವು ಮೋಸ ಹೋಗಬಹುದು. ನಮ್ಮಲ್ಲಿ ಸಹಾನುಭೂತಿ ನಟಿಸುವವರೊಂದಿಗಿನ ನಂಟು ಸರಿಯಲ್ಲ. ನೀವು ಅರಿಯದೆ ಅವರ ಬಲೆಯಲ್ಲಿ ಬೀಳಬಹುದು. ಒಳಿತು ಹೇಳಿ ನಿಮ್ಮನ್ನು ಸಮೀಪಿಸಿ ಮತ್ತೆ ಚಾಟಿಂಗಿನ ಮೂಲಕ ಪ್ರೇಮಕ್ಕೆ ತಲುಪುವವರ ಬಗ್ಗೆಯೂ ಗುರು ತಿಳಿಹೇಳಿದರು. ಸಮೀಪಕಾಲದಲ್ಲಿ ತನ್ನನ್ನು ಭೇಟಿಯಾದವರಲ್ಲಿ ಹೆಚ್ಚಿನವರು ವಿವಾಹ ವಾಗ್ದಾನದಲ್ಲಿ ಮೋಸ ಹೋದವರಾಗಿದ್ದಾರೆಂದು ಗುರು ನೆನಪಿಸಿದರು. ಪರಿಸರದ ಪರಿವಯೇ ಇಲ್ಲದೆ ಸಶ್ರದ್ಧವಾಗಿ ಆಲಿಸುತ್ತಿದ್ದ ವಿದ್ಯಾರ್ಥಿನಿಯರು ಪರಸ್ಪರ ನೋಡಿದರು. ಮೋಸಗಾರಿಕೆಯ ವಿವಿಧ ಮಜಲುಗಳ ಬಗ್ಗೆ ಕೇಳಿತಿಳಿದ ವಿದ್ಯಾರ್ಥಿನಿಯರು ಗಾಢವಾದ ಆಲೋಚನೆಯಲ್ಲಿ ಮಗ್ನರಾದರು. ನಾನು ಈ ಬಲೆಗೆ ಸಿಕ್ಕಿಕೊಂಡಿರುವೆನೋ? ಸ್ವಯಂ ಸಮೀಧಾನಪಟ್ಟುಕೊಳ್ಳಲು ಅವರ ಮನಸ್ಸುಗಳು ಮಂತ್ರಿಸಿತು. ಇಲ್ಲ, ಸರ್ವ ಕಾಮುಕರು ಮೋಸ ಮಾಡುವವರಾಗಿದ್ದರೂ ನಾನು ಪ್ರೀತಿಸುತ್ತಿರುವ ನನ್ನ ಪ್ರಿಯತಮ ಶುದ್ಧನು. ಗುರು ಉಪದೇಶ ಮುಂದುವರಿಸಿದರು. ಈಗ ಕೆಲವು ಹುಡುಗರಿದ್ದಾರೆ, ಅವರು ಹುಡುಗಿಯರೊಂದಿಗೆ ಹೇಳುವರು ವಿವಾಹದ ತನಕ ನಮ್ಮೆಡೆಯಲ್ಲಿ ಸಂಬಂಧ ಏನೂ ಬೇಡ. ಸಮಯವಾದಾಗ ನಾನು ಬಂದು ಅನ್ವೇಷಿಸುತ್ತೇನೆ. ಆಗ ನೀನು ಸಮ್ಮತಿ ಸೂಚಿಸಿದರೆ ಸಾಕು. ಅದುವರೆಗೆ ಮತ್ಯಾರನ್ನೂ ವಿವಾಹವಾಗಲು ನೀನು ಸಮ್ಮತಿಸದಿದದ್ದರೆ ಸಾಕು. ಅದೂ ಹೊಸ ರೀತಿಯ ವಂಚನೆಯೇ ಸರಿ. ಕಾಮುಕರೆಂಬ ಹೆಸರಿನಲ್ಲಿ ಪಿಶಾಚಿಗಳಾಗಿ ಬಂದು ಹೆಣ್ಮಕ್ಕಳ ಬಾಲ್ಯವನ್ನು ಕಸಿಯುವವರ ಬಗೆಗಿನ ಗುರುವಿನ ವಿವರಣೆ ಹಲವರ ಕಣ್ತೇವಗೊಳಿಸಿತು. ವಿದ್ಯಾರ್ಥಿನಿಯರು ಸಂಶಯಗಳು ಕೇಳ ತೊಡಗಿದರು. ಅದಾಗ ಫಾತಿಮಾ ಹೇಳಿದ್ದಾಗಿತ್ತು ವಿದ್ಯಾರ್ಥಿನಿಯರ ಸಂಶಯ. ಪ್ರೇಮದ ಅನಾಹುತಕ್ಕೆ ಬಲಿಯಾಗುವವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರಲ್ಲವೇ? ಯಾಕಾಗಿ ಗಂಡು ಮಕ್ಕಳು ಈ ಅನಾಹುತಕ್ಕೆ ಸಿಲುಕುವುದು ಕಡೆಮೆ? ಅರ್ಥಗರ್ಭಿತ ಸಂಶಯ. ಗುರು ಸ್ವಲ್ಪ ಸಮಯಕ್ಕೆ ಮೌನಿಯಾದರು. ನಂತರ ತನ್ನ ಅನುಭವ ಕಥನಗಳನ್ನು ಗುರು ಬಿಚ್ಚಿಟ್ಟರು. ಹುಡುಗರ ಪ್ರೇಮ ಹಾಗೂ ಹುಡುಗಿಯರ ಪ್ರೇಮ ಪರಸ್ಪರ ಒಂದೇ ರೀತಿಯಲ್ಲಿರುವುದಿಲ್ಲ. ಗಂಡು ಮಕ್ಕಳ ಪ್ರೀತಿ ಹೆಚ್ಚಿನವು ಟೈಂಪಾಸಿಗೇ ಆಗಿರುತ್ತದೆ. ಹೆಣ್ಣು ಮಕ್ಕಳು ಆಲೋಚಿಸದೆ ಪ್ರೇಮದ ಬಲೆಗೆ ಬಿದ್ದು ಮತ್ತೆ ಯಾವತ್ಕೂ ಮರಳಿ ಬರಲಸದಳ ರೀತಿಯಲ್ಲಿ ಲೋಕ್ ಆಗಿಬಿಡುವರು. ಕೆಲವರು ಕಾಮುಕರನ್ನು ಅಂಧವಾಗಿ ನಂಬಿ ಅವರು ಹೇಳಿದ್ದನ್ನೆಲ್ಲಾ ಕೇಳಿ ಮೋಸ ಹೋದ ನಂತರ ಮನವರಿಕೆ ಮಾಡುವರು. ಅವರು ಪ್ರೀತಿಸಿದ್ದು ಮನಸ್ಸನ್ನಲ್ಲ, ಚರ್ಮದ ಬೆಳುಪನ್ನಾಗಿತ್ತೆಂದು. ಮೋಸದ ಉರುಳುಗಳು ಒಂದೊಂದಾಗಿ ಬೋಧ್ಯವಾಗ ತೊಡಗಿದ ವಿದ್ಯಾರ್ಥಿನಿಯರ ಪ್ರಶ್ನೆಗಳು ಕೊನೆಗೊಂಡಿಲ್ಲ. ಫಿದಾ ಎದ್ದು ನಿಂತಳು. ಗುರೋ… ಮುಂಚೆಯೇ ಒಬ್ಬನನ್ನು ಪ್ರೇಮಿಸಿ ಹೆಚ್ಚು ಪರಿಚಯವಿರುವರನ್ನೇ ಜೇವನಕ್ಕೆ ಸ್ವೀಕರಿಸುವುದಲ್ಲವೇ ಪೂರ್ವಪರಿಚಯವಿಲ್ಲದೆ ತಕ್ಷಣ ಒಬ್ಬನನ್ನು ಕಂಡು ವಿವಾಹವಾಗುವುದಕ್ಕಿಂತ ಒಳ್ಳೆಯದು. ಒಂದು ಮುಗುಳ್ನಗೆಯೊಂದಿಗೆ ಗುರು ಹೇಳ ತೊಡಗಿದರು. ನವ ತಲೆಮಾರು ಕಂಡು ಹಿಡಿದ ನ್ಯಾಯ ಮನೋಹರವಾಗಿದೆ. ಆದರೆ, ಅದರಲ್ಲಿ ಅವಿತಿರುವ ಅವಘಡ ನೀವು ಮರೆಯಬಾರದು. ವಿವಾಹ ನಲ್ಮೆಯಲ್ಲಿ ಪ್ರಾರಂಭಿಸಿ ಸಸಂತೋಷವಾಗಿ ಹೋಗಬೇಕಾದ ಇಬಾದತ್, ಹಲವು ಸುನ್ನತ್ ಗಳೆಡೆಯಲ್ಲಿ ನನ್ನ ಸುನ್ನತ್ ಎಂದು ನಬಿ (ಸ) ವಿಶೇಷವಾಗಿ ತಿಳಿಸಿದ ಪುಣ್ಯ ಕರ್ಮವಲ್ಲವೇ ನಿಕಾಹ್. ಹೌದು ಎಂದು ತಲೆ ಅಲ್ಲಾಡಿಸಿ ಉತ್ತರಿಸಿದರು ಅವರು. ಸ್ವರ್ಗದ ವರೆಗೆ ನೆಲೆನಿಲ್ಲಬೇಕಾದ ಬಂಧವಲ್ಲವೇ ಕುಟುಂಬ ಜೀವನ? ಗುರುವಿನ ಮಾರನೆಯ ಪ್ರಶ್ನೆ. ಹೌದು, ಅವರು ಉತ್ತರಿಸಿದರು. ಸ್ವರ್ಗಕ್ಕಿರುವ ಹಾದಿಯನ್ನು ಸುಲಭಗೊಳಿಸುವ ಈ ಪುಣ್ಯ ಕರ್ಮದ ಮುನ್ನುಡಿಗಳು ಹರಾಮಿನಲ್ಲಿ ಪ್ರಾರಂಭಿಸಿದ್ದಾಗಬಾರದು. ಮದ್ಯ ಸೇವಿಸಿ ಸಹರಿ ಮಾಡಿ ಉಪವಾಸ ಹಿಡಿಯುವುದು ಹಾಗೂ ಒಬ್ಬ ವ್ಯಕ್ತಿಯ ದೀನಿನ ಅರ್ಧವನ್ನು ಪೂರ್ತಿಗೊಳಿಸುವ ನಿಕಾಹ್ ಎಂಬ ಇಬಾದತಿಗೆ ಮುನ್ನುಡಿಯಾಗಿ ಹಲವು ಹರಾಮುಗಳು ಮಾಡುವುದು ಇವೆರಡು ಪರಸ್ಪರ ಒಮ್ಮೆ ತುಲನೆ ಮಾಡಿ ನೋಡಿರೆಂಬ ಗುರುವಿನ ಪ್ರಶ್ನೆ! ಉತ್ತರಿಸಲಾಗದೆ ಅವರ ಕಂಠ ನಡುಗಿತು. ಎಲ್ಲರ ಮನಸ್ಸು ಹೇಳತೊಡಗಿತು, ನಾಥಾ... ನನ್ನ ಕುಟುಂಬ ಜೀವನ ಈ ಪ್ರೇಮದ ಮುಂದುವರಿಕೆಯಾದರೆ, ಹರಾಮಿನಿಂದ ಪ್ರಾರಂಭಿಸಿದ ಕಾರಣ ಬರಕತ್ ಉಂಟಾಗದೇ ಇರಬಹುದಲ್ಲವೇ..? ಗುರು ಮುಂದುವರಿಸಿದರು. ಸ್ವಾಭಾವಿಕ ವಿವಾಹದಲ್ಲಿ ಪತಿಯ ಒಂದು ಮುಖವನ್ನಷ್ಟೇ ಕಾಣುತ್ತೇವೆ, ಹೊರತು ಪ್ರೇಮ ವಿವಾಹದಲ್ಲಿ ಪ್ರೇಮ ಕಾಲದ ಮುಖವನ್ನೂ ಜೀವನ ಕಾಲದ ಮುಖವನ್ನೂ ಕಾಣುತ್ತೇವೆ. ಪೂರ್ವ ಹಾಗೂ ಪ್ರಸ್ತುತ ಜೀವನದ ಸ್ವಭಾವ ರೀತಿಯಲ್ಲಿ ವ್ಯತ್ಯಾಸ ಪ್ರಕಟವಾಗುವುದು ಖಂಡಿತಾ. ಪ್ರೇಮ ಕಾಲದಲ್ಲಿ ಹೇಳಿದ್ದೂ ತೋರಿಸಿದ್ದೂ ಎಲ್ಲವೂ ನಿಮ್ಮನ್ನು ಸ್ವಂತವಾಗಿಸಲು ಮಾತ್ರವಾಗಿತ್ತು. ಇನ್ನು ಅವನ ಅಸಲಿ ಬಣ್ಣ ಬಯಲಾದೀತು. ಮುಂಚೆ ಕಾಣುತ್ತಿದ್ದ ಸ್ವಭಾವದಲ್ಲಿ ವ್ಯತ್ಯಾಸ ಕಾಣುವಾಗ ತಪ್ಪು ಕಲ್ಪನೆ ಬರುವುದು ಸಹಜ. ನಂತರ ಅಗಲುವಿಕೆ ಭಾಸವಾಗುತ್ತದೆ. ಮತ್ತೆ ಇದುವರೆಗೂ ನನ್ನನ್ನು ಮೋಸಮಾಡುತ್ತಲಿದ್ದನೆಂದು ತಿಳಿಯುತ್ತದೆ. ಮತ್ತೆ ಅವಿಶ್ವಾಸ, ತಪ್ಪುಕಲ್ಪನೆ, ಕಲಹ ಕೊನೆಗೆ ತಲಾಖ್. ಇದೇ ಹೆಚ್ಚಿನ ಅಂಶವೂ ಘಟಿಸುವುದು. ಕುಟುಂಬ ಜೀವನದಲ್ಲಿ ಪೂರ್ವ ಪರಿಚಯವಲ್ಲ ಬೇಕಾದದ್ದು, ಹೊರತು ಅಲ್ಲಾಹನ ಸಹಾಯವಾಗಿದೆ. ತೇವಗೊಂಡ ಕಣ್ಣುಗಳೊಂದಿಗೆ ಗುರುವನ್ನು ವೀಕ್ಷಿಸುತ್ತಿದ್ದ ವಿದ್ಯಾರ್ಥಿನಿಗಳೆಡೆಯಿಂದ ಒಬ್ಬಳು ಎದ್ದು ನಿಂತು ತನ್ನ ಅನುಭವ ಹೇಳ ತೊಡಗಿದಳು. ಗುರೋ, ನಾನು ನಾಲ್ಕು ವರ್ಷವಾಯಿತು ಪ್ರೇಮ ಪ್ರಾರಂಭಿಸಿ. ನನ್ನ ಕಾಮುಕನನ್ನು ಪರೀಕ್ಷಿಸಲೆಂದು ನಾನು ಒಂದೊಮ್ಮೆ ಒಂದು ಹೊಸ ಫೇಸ್ಬುಕ್ ಎಕೌಂಟ್ ಪ್ರಾರಂಭಿಸಿದೆ. ಅಂದದ ಹುಡುಗಿಯೊಬ್ಬಳ ಫೋಟೋವನ್ನು ಪ್ರೊಫೈಲ್ ಮಾಡಿದೆ. ನಾಲ್ಕು ವರ್ಷದಿಂದ ನನ್ನೊಂದಿಗೆ ಪ್ರೀತಿಯಿಂದಿರುವ ಕಾಮುಕನಿಗೆ ಆ ಎಕೌಂಟಿಂದ ನಾನೊಂದು ಮೆಸೇಜ್ ಮಾಡಿದೆ. ಮೆಸೇಜ್ ನೋಡಿದ ತಕ್ಷಣ ರಿಪ್ಲೇ ನೀಡತೊಡಗಿದ. ಒಂದು ಹೊಸ ಹೆಣ್ಣಿನಲ್ಲಿ ಮಾತನಾಡುತ್ತಿದ್ದೇನೆಂದು ಅರ್ಥೈಸಿದ ಅವನು ಏನೆಲ್ಲಾ ಮಾತನಾಡುವನು ಎಂದು ತಿಳಿಯಲು ನಾನು ಅಭಿನಯಿಸಿ ಮಾತನಾಡಿದೆ. ಮೊದಲು ನನ್ನೊಂದಿಗೆ ಒಂದು ಹೊಸ ಹೆಣ್ಣೆಂಬ ರೀತಿಯಲ್ಲಿ ಹೇಳಿದ ಎಲ್ಲಾ ಡಯಲಾಗುಗಳು ಅವನು ಹೇಳ ತೊಡಗಿದ. ನನ್ನ ಕಣ್ಣು ತುಂಬಿತು. ಯಾವುದೋ ಒಬ್ಬಳು ಸ್ತ್ರೀಯೊಂದಿಗೆ ಮಾತನಾಡುತ್ತಿದ್ದೇನೆಂದು ತಿಳಿದೂ ಅವನು ಎಲ್ಲವನ್ನೂ ಹೇಳುತ್ತಿದ್ದಾನೆ. ಆದರೂ ನನ್ನ ಮನಸ್ಸು ಅವನನ್ನು ಅವಿಶ್ವಸಿಸಲು ಸಮ್ಮತಿಸುತ್ತಿರಲಿಲ್ಲ. ನನಗೆ ಗೊತ್ತಿದೆ. ನಾನು ಒಂದು ಮಹಾ ಅಪಾಯದಂಚಿನಲ್ಲಿದ್ದೇನೆಂದು. ನನಗೆ ಇದರಿಂದ ಪಾರಾಗಬೇಕು. ನೀವು ನನಗೆ ಸಹಾಯ ಮಾಡಬೇಕು. ಆಸನದಿಂದ ಮತ್ತೋರ್ವ ವಿದ್ಯಾರ್ಥಿನಿ ಎದ್ದು ನಿಂತು ಹೇಳ ತೊಡಗಿದಳು. ನನಗೂ ಒಂದು ಕಾಮುಕನಿದ್ದಾನೆ. ಅವನೀಗ ಡಿಗ್ರಿ ಮಾಡುತ್ತಿದ್ದಾನೆ. ನನಗೆ ಅವನು ಇಷ್ಟವಾಗಿರಲಿಲ್ಲ. ಅವನ ಸ್ನೇಹಾಭ್ಯರ್ಥನೆ ನಾನು ಹಲವು ಬಾರಿ ನಿರಾಕರಿಸಿದೆನು. ನನ್ನ ಸ್ನೇಹಿತೆಯರನ್ನು ಅವನು ಆಮಿಶವೊಡ್ಡಿದ ಮೇರೆಗೆ ಅವರು ನನ್ನನ್ನು ಒತ್ತಾಯಿಸಿದರು. ಏನಾದರೂ ವಿವಾಹವಾಗಬೇಕಾದವರಲ್ಲವೇ ಎಂದು ಹೇಳಿ ನನ್ನನ್ನು ಅವನ ಬಲೆಗೆ ಸಿಕ್ಕಿಸಿದ್ದಾನೆ. ಸತ್ಯ ಹೇಳುವುದಾದರೆ ಈ ಪ್ರೇಮ ಕಾರಣ ನನಗೆ ಇಬಾದತುಗಳಲ್ಲಿ ಹೆಚ್ಚಿನ ಗಮನ ವಹಿಸಲು ಸಾಧ್ಯಾವಾಗುತ್ತಿಲ್ಲ. ಅವನೊಂದಿಗೆ ಮಾತನಾಡಲೇ ಸಮಯ ಸಾಕಾಗುವುದಿಲ್ಲ. ನಾನು ನನ್ನ ಮಾತಾಪಿತರನ್ನು ಹಲವು ಬಾರಿ ಮೋಸ ಮಾಡಿದ್ದೇನೆ. ಸ್ನೇಹಿತರ ಮನೆಗೆಂದು ಹೇಳಿ ಮನೆಯಿಂದ ಹೊರಡುವೆ; ಅವನ ಜೊತೆ ತಿರುಗಾಡಲು. ಇದು ಹೇಳುವಾಗ ಅವಳ ಕಂಬನಿಗಳು ಮುಖಾವರಣದಿಂದಾಗಿ ನೆಲಕ್ಕೆ ಸೇರಿತ್ತು. ಅವಳು ಮುಂದುವರಿಸಿದಳು. ಇಂದು ನಾನೊಂದು ಸತ್ಯವನ್ನರಿತೆ. ನನ್ನನ್ನು ಅಲ್ಲಾಹನಿಂದಲೂ ಮಾತಾಪಿತರಿಂದಲೂ ದೂರವಾಗಿಸಿದ್ದು ನನ್ನ ಕಾಮುಕನೇ. ಇಂದಿನಿಂದ ಕಾಮುಕನಿಗೆ ಸೂಕ್ತವಾದ ಪರ್ಯಾಯ ಪದ "ನರಕ ಸಹಾಯಿ" ಎಂದು ನಾನು ಅರಿತೆ. ಹಲವು ಸಂದರ್ಶಕರು ಹೊರಗಡೆ ಗುರುವನ್ನು ಕಾದು ನಿಂತಿದ್ದರಿಂದ ಹೃಸ್ವ ಉಪದೇಶದ ನಂತರ ಮತ್ತೊಮ್ಮೆ ಮಾತನಾಡೋಣ ಎಂದು ಹೇಳಿ ಗುರು ಎದ್ದೇಳಲು ಅನುವಾದರು. ಆಯಿಶಾ ಗುರುವಿನೊಂದಿಗೆ ಕೇಳಿದಳು. ಗುರೋ ಕೊನೆಯದಾಗಿ ಒಂದು ವಿಚಾರ ನಮಗೆ ತಿಳಿಯಬೇಕೆಂದಿದೆ. ನಮಗೆ ಬದಲಾವಣೆ ಬೇಕು ಹೇಗೆ ಸಾಧ್ಯ? ಅವಸರವಿದ್ದರೂ ಈ ಪ್ರಶ್ನೆಗೆ ಉತ್ತರಿಸದೆ ವಿದ್ಯಾರ್ಥಿನಿಯರನ್ನು ಮರಳಿ ಕಳಿಸುವುದು ಅನ್ಯಾಯ ಎಂದು ಮನಗಂಡ ಗುರು ಸಂಗ್ರಹಿಸಿ ಹೇಳುವೆನೆಂದು ಹೇಳಿ ಹೇಳ ತೊಡಗಿದರು.
ಪ್ರೀತಿಯ ಮಕ್ಕಳೇ..., ಉಮ್ಮಯಾಗಿದ್ದಾರೆ ಸ್ವರ್ಗ ಯಾತ್ರೆಯ ದೊಡ್ಡ ಸಹಾಯಿ. ಉಮ್ಮರ ಆಶೀರ್ವಾದವಾಗಿದೆ ಉನ್ನತರನ್ನು ಉನ್ನತರಾಗಿಸಿದ್ದು. ಮಾತಾಪಿತರ ಮುಖಕ್ಕೆ ದ್ವೇಷದಿಂದ ನೋಡುವುದು ಕಅ್ ಬಾ ಹೊಡೆದುರುಳಿಸುವುದಕ್ಕಿಂತಲೂ ದೊಡ್ಡ ಪಾಪ. ಸ್ನೇಹದಿಂದ ಅವರನ್ನೊಮ್ಮೆ ನೋಡುವುದು ಒಂದು ಹಜ್ಜಿಗೆ ತುಲ್ಯವೆಂಬ ಹದೀಸ್ ಗುರು ನೆನಪಿಸಿದರು. ಭೂಮಿಯಲ್ಲಿರುವ ಸ್ವರ್ಗ ಮಣ್ಣು ತಾಯಿಯರು ಮೆಟ್ಟಿದ ಮಣ್ಣೆಂದು ಕಲಿಸಿದ ಲುಕ್ಮಾನುಲ್ ಹಕೀಂ(ರ) ರವರು ಮನೆಯಿಂದ ಹೊರಡುವಾಗ ತಾಯಿಯ ಮುಖ ನೋಡಿ 'ರಬ್ಬಿರ್ಹಂಹುಮಾ ಕಮಾ ರಬ್ಬಯಾನೀ ಸಗೀರಾ' ಎಂಬ ಪ್ರಾರ್ಥನಾ ವಚನ ಹೇಳುತ್ತಿದ್ದರು. (ಅಬೂ ಹುರೈರ). ಮಾತಾಪಿತರ ಕಣ್ಣೀರಿಳಿಸುವ ಒಂದು ಕೆಲಸವೂ ನಮ್ಮಿಂದಾಗಬಾರದು. ತುಂಬಿದ ಕಣ್ಣುಗಳೊಂದಿಗೆ ಹೇಳಿದ ಈ ಉಪದೇಶದಿಂದ ವಿದ್ಯಾರ್ಥಿನಿಯರ ಕಣ್ಣುಗಳು ತುಳುಕಿತು. ಎಲ್ಲರ ಮನಸ್ಸು ಮಂತ್ರಿಸುತ್ತಿತ್ತು, ಕಾಮುಕನಲ್ಲ ಮುಖ್ಯ, ಮಾತಾಪಿತರೇ. ಮಾತಾಪಿತರ ತೃಪ್ತಿ ಪಡೆಯಬೇಕು. ಅದರ ಮುಖಾಂತರ ಅಲ್ಲಾಹನ ತೃಪ್ತಿ ಪಡೆಯಬೇಕು. ಇನ್ ಶಾ ಅಲ್ಲಾಹ್... ಇಂದಿನಿಂದ ನಾನು ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ. ಅಲ್ಲಾಹನೇ ಸೌಭಾಗ್ಯ ಕರುಣಿಸು... HRS

Comments