ದಂತ ಶುಚೀಕರಣೆ

"ನನ್ನ ಉಮ್ಮತಿಗೆ ಕ್ಲೇಶವಾಗುತ್ತಿಲ್ಲದಿದ್ದರೆ ದಂತ ಶುಚೀಕರಣವನ್ನು ನಾನು ಖಡ್ಡಾಯಗೊಳಿಸುತ್ತಿದ್ದೆ" (ಪ್ರವಾದಿ ವಚನ) ದಂತಶುಚೀಕರಣೆಯ ಮಹತ್ವ ಎಷ್ಟೆಂದು ಮೇಲಿನ ಹದೀಸಿನಿಂದ ತಿಳಿಯಬಹುದಾಗಿದೆ. ನಬಿ (ಸ) ನುಡಿದರು: "ಮಿಸ್ವಾಕ್ ಮಾಡಿ ನಿರ್ವಹಿಸುವ ನಮಾಝಿಗೆ ಅದಿಲ್ಲದೆ ನಿರ್ವಹಿಸುವ 70 ನಮಾಝುಗಳ ಶ್ರೇಷ್ಟತೆಯಿದೆ." (ಬೈಹಖಿ) "ಮಿಸ್ವಾಕ್ ಮಾಡದೆ ನಿರ್ವಹಿಸುವ 70 ರಕಅತುಗಳಿಗಿಂತ ಉತ್ತಮ ಮಿಸ್ವಾಕ್ ಮಾಡಿ ನಿರ್ವಹಿಸುವ 2 ರಕಅತಾಗಿದೆ." (ಅಹ್ಮದ್) ವುಝೂ ಮಾಡುವಾಗಲೂ ನಮಾಝಿನ ಮುಂಚೆಯೂ ಇದು ನಿರ್ವಹಿಸುವುದು ಸುನ್ನತ್ತಿದೆ. ಪ್ರವಾದಿಯರು ಮನೆಗೆ ಪ್ರವೇಶಿದರೆ ಪ್ರಥಮವಾಗಿ ಮಾಡುತ್ತಿದ್ದ ಕರ್ಮ ಮಿಸ್ವಾಕಾಗಿತ್ತು. ಆಯಿಶಾ (ರ) ರಿಂದ ವರದಿಯಾದ ಹದೀಸಿನಲ್ಲಿ ಈ ವಿಷಯ ಕಾಣಬಹುದಾಗಿದೆ. ಮರಣ ರೋಗದಲ್ಲಿರುವ ರೋಗಿ ಮಿಸ್ವಾಕ್ ಮಾಡುವುದರಿಂದ ಆತ್ಮ ಶರೀರದಿಂದ ಸರಳವಾಗಿ ಹೋಗುದಕ್ಕೆ ಕಾರಣವಾಗುತ್ತದೆ. ಮಿಸ್ವಾಕ್ ಮಾಡುವುದರೆಡೆಯಲ್ಲಿ اللهم بارك لي فيه يا ارحم الراحمين ಎಂದು ಹೇಳುವುದು ಸುನ್ನತ್ತಿದೆ. ಹರಿದಾದ ಯಾವುದೇ ವಸ್ತುವಿನಿಂದಲೂ ಮಿಸ್ವಾಕ್ ಸಾದ್ಯವಾಗುತ್ತದೆ. ಮರಕಡ್ಡಿಯಿಂದಲೂ ಒರೆತವಿರುವ ಬಟ್ಟೆಯಿಂದಲೂ ಆಗಬಹುದು. ಆದರೆ ಅತ್ಯುತ್ತಮವಾದುದು ಸುಗಂಧವಿರುವ ಮರಕಡ್ಡಿಗಳಾಗಿದೆ. ಅದರಲ್ಲೂ ಉತ್ತಮವಾದದ್ದು ಅರಾಕಾಗಿದೆ. ಇಂದು ನಾವು ಉಪಯೋಗಿಸುವ ಟೂತ್ ಬ್ರಷಿಂದಲೂ ಇದು ಸಾಧ್ಯಾವಾಗುತ್ತದೆ. ಹರಿದಾದ ಬಟ್ಟೆಯನ್ನು ಕೈಗೆ ಸುತ್ತಿ ಅದರಿಂದಲೂ ಸಾಧ್ಯ. ಏನೂ ಲಭ್ಯವಾಗದಿದ್ದರೆ ಕೇವಲ ಬೆರಳಿನಿಂದಲೂ ಸಾಕಾಗುತ್ತದೆಂದ ಇಮಾಂ ನವವಿ (ರ) ಹೇಳಿದ್ದಾರೆ. *ಮಿಸ್ವಾಕಿನ ವಿಧಾನ* ಹಲ್ಲುಗಳಲ್ಲಿ ಅಗಲಕ್ಕೂ ನಾಲಗೆಯಲ್ಲಿ ಉದ್ದಕ್ಕೂ ಆಗಿದೆ ಮಿಸ್ವಾಕ್ ಮಾಡಬೇಕಾದದ್ದು. ಎಲ್ಲಾ ಫರಳ್ ಹಾಗೂ ಸುನ್ನತ್ ನಮಾಝಿಗಾಗಿ ನಮಾಝಿನ ಮುಂಚೆ ಮಿಸ್ವಾಕ್ ಮಾಡುವುದು ಸುನ್ನತ್ತಿದೆ. ಪ್ರಸ್ತುತ ನಮಾಝಿನ ವುಝೂವಿಗಾಗಿ ಮಿಸ್ವಾಕ್ ಮಾಡಿದ್ದಾದರೂ ಇದು ಸುನ್ನತ್ತೇ ಆಗಿರುತ್ತದೆ. ತರಾವೀಹಿನಂತ ಎಲ್ಲಾ ಎರಡು ರಕಅತುಗಳಲ್ಲಿ ಸಲಾಮಿರಿಸುವ ನಮಾಝಾದರೂ ಇದೇ ವಿಧಿಯಾಗಿರುತ್ತದೆ. ನಮಾಝಿನ ಮುಂಚೆ ಮಿಸ್ವಾಕ್ ಮಾಡಲು ಮರೆತರೆ ಅಥವಾ ಸಾಧ್ಯವಾಗದಿದ್ದರೆ ನಮಾಝಿನೆಡೆಯಲ್ಲೂ ಅದನ್ನು ನಿರ್ವಹಿಸಬಹುದು. ಆದರೆ ಸತತ ಮೂರು ಬಾರಿ ಅಲುಗಾಡಿದರೆ ನಮಾಝ್ ಬಾತಿಲಾಗುವುದೆಂಬುದು ಗಮನಿಸಬೇಕು. ನಮಾಝ್ ಬಾತಿಲಾಗದೆ ಈ ಸುನ್ನತ್ತನ್ನು ಪಡೆಯಲು ಸತತ ಮೂರು ಬಾರಿ ಅಲುಗಾಡದಂತೆ ಗಮನಿಸಿ ಮಿಸ್ವಾಕ್ ಮಾಡಬಹುದು. ಇತರ ವಸ್ತುಗಳಿಂದ ಮಿಸ್ವಾಕ್ ಮಾಡಲು ಅಸಾಧ್ಯವಾದರೆ ಕನಿಷ್ಟ ಪಕ್ಷ ಕೈಬೆರಳಿನಿಂದಾದರು ಮಿಸ್ವಾಕ್ ಮಾಡಿದರೆ ಇದರ ಪುಣ್ಯ ಗಳಿಸಬಹುದು. ವಿನಾ ಕಾರಣ ವ್ರತವಿರುವವನು ಮಧ್ಯಾಹ್ನದ ನಂತರ ಮಿಸ್ವಾಕ್ ಮಾಡುವುದು ಕರಾಹತ್ ಆಗಿದೆ. *ಮಿಸ್ವಾಕ್ ಮಾಡುವುದರಿಂದ ಲಭಿಸುವ ಫಲಗಳು* 1. ಅಲ್ಲಾಹನ ಪ್ರೀತಿಗೆ ಪಾತ್ರವಾಗುವುದು 2. ಮರಣ ಸಮಯ ಕಲಿಮ ಹೇಳಲು ಭಾಗ್ಯ ಲಭಿಸುವುದು. 3. ಬುದ್ಧಿಶಕ್ತಿ ಲಭಿಸುವುದು. 4. ಇಬಾದತುಗಳಿಗೆ ಇಮ್ಮಡಿ ಪುಣ್ಯ ಲಭಿಸುವುದು. 5. ತಲೆಸಂಬಂಧವಾದ ರೋಗಗಳು ವಾಸಿಯಾಗುವುದು. 6. ದೃಷ್ಟಿ ಶಕ್ತಿ ಹೆಚ್ಚುವುದು. 7. ಮಹ್ಶರಾದ ತನಿಖಾದಿನ ಕಿತಾಬ್ ಬಲ ಕೈಯಲ್ಲಿ ಲಭಿಸುವುದು. 8. ಖಬರ್ ಜೀವನ ಸಂತೋಷಗೊಳ್ಳುವುದು. 9. ಮರಣ ವೇಳೆ ಅಝ್ರಾಈಲ್ ಒಳ್ಳೆಯ ರೂಪದಲ್ಲಿ ಬರುವುದು. 10. ಕೂದಲಿನ ನರೆ ಬೇಗನೆ ಬರದಿರುವುದು. 11. ಆಹಾರದಲ್ಲಿ ಬರಕತ್ ಲಭಿಸುವುದು. 12. ಜೀವನದಲ್ಲಿ ಸಮೃಧಿಯುಂಟಾಗುವುದು. *ಮಿಸ್ವಾಕ್ ಸುನ್ನತಾಗುವ ಸಂಧರ್ಭಗಳು* ವುಝೂ, ನಮಾಝ್ ಅಲ್ಲದೆ ಹಲವಾರು ಕಾರ್ಯಗಳಿಗಾಗಿ ಮಿಸ್ವಾಕ್ ಸುನ್ನತ್ತಿದೆ. ಒಳ್ಳೆಯ ಯಾವುದೇ ಕಾರ್ಯಕ್ಕೂ ಇದು ಸುನ್ನತಾಗಿದೆ. ಅವುಗಳಲ್ಲಿ ಕೆಲವು ನಮಗೆ ಪರಿಶೀಲಿಸೋಣ. 1. ಖುರ್ ಆನ್, ಹದೀಸ್ ಪಾರಾಯಣ ಹಾಗೂ ಇಲ್ಮ್ ಕಲಿಯುವ ಮುನ್ನ. 2. ನಿದ್ದೆ ಕಾರಣದಿಂದಲೋ ಯಾವುದೇ ವಸ್ತುಗಳು ತಿಂದ ಕಾರಣದಿಂದಲೋ ಬಾಯಿಯ ವಾಸನೆಯಲ್ಲೋ ಬಣ್ಣದಲ್ಲೋ ರುಚಿಯಲ್ಲೋ ವ್ಯತ್ಯಾಸ ಕಂಡುಬಂದರೆ. 3. ನಿದ್ದೆಯಿಂದೆದ್ದರೆ, ನಿದ್ದೆ ಮಾಡಲು ಬಯಸಿದರೆ. 4. ಮಸೀದಿ, ಮನೆ ಪ್ರವೇಶಿಸಿದರೆ. 5. ಸಹರಿಯ ಸಂಧರ್ಭ. ಇತರೆ ಇಬಾದತುಗಳಂತೆ ಮಿಸ್ವಾಕಿನ ಸುನ್ನತ್ ಲಭ್ಯವಾಗಬೇಕಾದರೆ ಗಮನಿಸಬೇಕಾದದ್ದು ಅದರ ಪ್ರಾರಂಭದಲ್ಲಿ ನಿಯ್ಯತ್ ಮಾಡುವುದು. ಸುನ್ನತ್ತಾದ ಮಿಸ್ವಾಕ್ ನಾನು ಅಲ್ಲಾಹನಿಗಾಗಿ ಮಾಡುತ್ತೇನೆ ಎಂದಾಗಿದೆ ನಿಯ್ಯತ್ ಮಾಡಬೇಕಾದದ್ದು. ಅಲ್ಲಾಹು ನಮ್ಮ ಜ್ಞಾನವನ್ನು ನಾಫಿಆಗಿಸಲಿ. ನಮ್ಮ ಆಖಿಬತ್ ಹಸನಾಗಿಸಲಿ. ನಮ್ಮ ಸದುದ್ದೇಶಗಳನ್ನು ನೆರವೇರಿಸಲಿ. ಆಮೀನ್.

Comments