ಇನ್ನಾದರೂ ಬದಲಾಗಬಾರದೇಕೆ??

ನಮಗೆ ಅಲ್ಲಾಹನಲ್ಲಿ ವಿಶ್ವಾಸವಿಲ್ಲದಾಯಿತೇ...? ಪರಲೋಕದಲ್ಲಿ ನಮಗೆ ವಿಶ್ವಾಸವಿಲ್ಲವೇ...? ಸ್ವರ್ಗ ನರಕಗಳಲ್ಲಿ ವಿಶ್ವಸಿಸುವವರಲ್ಲವೇ ನಾವು..? ಈ ಜೀವನ ಇಂದೋ ನಾಳೆಯೋ ಕೊನೆಗೊಳ್ಳುವುದು... ಇಲ್ಲಿ ಸುಖಭೋಗಗಳನ್ನು ಬದಿಗಿಟ್ಟು ಕಷ್ಟನಷ್ಟಗಳನ್ನು ಆಯ್ಕೆಮಾಡಬೇಕಾದೀತು... ನಮಗಿಲ್ಲಿ ಶಾಶ್ವತವಾಗಿ ನೆಲೆಸಲು ಸಾದ್ಯವೆಂದು ಖಚಿತವಾಗಿದ್ದರೆ, ಮರಣ ಹೊಂದುವುದಿಲ್ಲವೆಂದು ಹೇಳಲು ಸಾಧ್ಯವಿದ್ದರೆ, ನಮಗೆ ಇಲ್ಲಿ ಏನೂ ಮಾಡಬಹುದಿತ್ತು... ಆದರೆ ಇದು ನಶ್ವರವಾದ ಜೀವನ. ಕೊನೆ ಯಾವಾಗವೆಂದು ಯಾರಿಗೂ ತಿಳಿಯದ ಲೋಕ. ಪರಲೋಕವಾಗಿದೆ ಶಾಶ್ವತ... ಅಲ್ಲಾಗಿದೆ ವಿಜಯಿಸಬೇಕಾದದ್ದು... ಅಲ್ಲಿನ ಒಂದು ದಿನಕ್ಕೆ 50,000 ವರ್ಷಗಳ ಧೈರ್ಘ್ಯವಿದೆಯಂತೆ... ಮರಣವಿಲ್ಲದ ಲೋಕ... ಕೊನೆಯಿಲ್ಲದ ಪ್ರಯಾಣ... ಅದನ್ನು ನರಕದಲ್ಲಿ ಬೆಂದು ಮುಗಿಸಬೇಕೇ... ನರಕದ ಅತೀ ಚಿಕ್ಕ ಶಿಕ್ಷೆ ಖರ್ಜೂರದ ಬಿತ್ತಿನಷ್ಟು ಗಾತ್ರದ ಅಗ್ನಿ ಕಟ್ಟೆಯ ಮೇಲೆ ನಿಲ್ಲುವುದಾಗಿದೆ... ಕಾಲಿಂದ ಹಿಡಿದು ತಲೆಮೆದುಳು ತನಕ ಅದರ ಬೇಗೆಯಿಂದ ಬೆಂದು ಕುದಿಯುತ್ತದೆ... ಹಾಗಾದರೆ ನರಕಕ್ಕೆ ಎಸೆಯಲ್ಪಟ್ಟವರ ಕತೆಯೇನಿರಬಹುದು...? ಅಲ್ಲಾಹು ನಮ್ಮನ್ನು ಸೃಷ್ಟಿಸಿದ್ದು ಅವನನ್ನು ಆರಾಧಿಸಲಿಕ್ಕಾಗಿದೆ... ಅವನ ಆಜ್ಞೆಗಳನ್ನು ಪಾಲಿಸಲಿಕ್ಕಾಗಿದೆ... ಅಲ್ಲಾಹನಿಗೆ ಮನುಷ್ಯರಲ್ಲಿ ಅತಿಯಾದ ಪ್ರೀತಿಯಿದೆ... ಅದರಿಂದಾಗಿದೆ ನಮ್ಮನ್ನು ಮುಸ್ಲಿಮಾಗಿ ಆಯ್ಕೆಮಾಡಿದ್ದು... ನಮ್ಮನ್ನು ಸ್ವರ್ಗದಲ್ಲಿ ಕಾಣಲು ಅತಿಯಾಗಿ ಆಗ್ರಹಿಸುವವನು ಅವನೇ ಆಗಿದ್ದಾನೆ... ನಾವು ಈ ಇಹಲೋಕ ಜೀವನವನ್ನು ಪರಲೋಕ ಜೀವನಕ್ಕಾಗಿ ಪರಿವರ್ತಿಸಬೇಕಾಗಿದೆ... ಅಲ್ಲದಿದ್ದರೆ ನೀವೇ ಹೇಳಿ... ಕೇವಲ ಅಲ್ಪ ಕಾಲದ ದುನಿಯಾದ ಸುಖವೇ ಅಥವಾ ಶಾಶ್ವತವಾದ ಪರಲೋಕ ಸುಖವೇ ನಮಗೆ ಬೇಕಾದದ್ದು? ನಮ್ಮ ಈಗಿನ ಪ್ರವರ್ತಿಗಳನ್ನೊಮ್ಮೆ ಅವಲೋಕನೆ ಮಾಡಿ ನೋಡೋಣ... ನಮಗೆ ಸ್ವರ್ಗ ಪ್ರವೇಶದ ಅರ್ಹತೆಯಿದೆಯೇ...? ಕೊನೆಯಲ್ಲೊಂದು ವಿಚಾರ... ತಪ್ಪುಗಳು ಮನುಷ್ಯ ಸಹಜ... ಆದರೆ ತಪ್ಪುಗಳನ್ನು ರಬ್ಬೆದುರು ಎತ್ತಿಹೇಳಿ ತೌಬ ಮಾಡುವವರೊಂದಿಗಾಗಿದೆ ಅಲ್ಲಾಹನಿಗೆ ಇಷ್ಟ... ಭೂತಕಾಲವನ್ನು ನಮಗೆ ರಬ್ಬೆದುರು ಕಣ್ಣೀರಿಳಿಸಿ ಹೇಳೋಣ, ಮಾಡಿದ್ದನ್ನೆಲ್ಲಾ ತೊಳೆದು ಸ್ವಚ್ಛಗೊಳಿಸೋಣ... ಭವಿಷ್ಯಕ್ಕಾಗಿ ಪ್ರವರ್ತಿಸೋಣ, ಪ್ರಾರ್ಥಿಸೋಣ... ವರ್ತಮಾನ ಕಾಲವನ್ನಾಗಿದೆ ಸೂಕ್ಷಿಸಬೇಕಾದದ್ದು... ಸಣ್ಣದಾಗಿ ಕಾಣುವ ಹಲವು ತಪ್ಪುಗಳು ದೊಡ್ಡ ತಪ್ಪುಗಳಾಗಿರುತ್ತದೆ... ಎಷ್ಟು ಕ್ಷುಲ್ಲಕವಾಗಿಯಾಗಿದೆ ನಾವು ಅಮಲುಗಳನ್ನು ಉಪೇಕ್ಷಿಸುತ್ತಿರುವುದು... ಎಷ್ಟು ಸಿಂಪಳಾಗಿಯಾಗಿದೆ ನಾವು ಸುಳ್ಳುಗಳನ್ನಿ ಹೇಳುತ್ತಿರುವುದು... ಬಡ್ಡಿ ಹಣ ತಿನ್ನುತ್ತಿರುವುದ... ಔರತ್ ಪ್ರತ್ಯಕ್ಷಗೊಳಿಸುತ್ತಿರುವುದ.... ಅಸಭ್ಯ ಹೇಳುತ್ತಿರುವುದು... ಅಕ್ರಮ ಮಾಡುವುದು... ಹರಾಮನ್ನು ನೋಡುವುದು... ಅಲ್ಲಾಹುವಿಗೆ ಮರಳುವುದು ಎಂಬುದೇ ರಕ್ಷೆ... ನಮಗೂ ಬದಲಾಗಬೇಕು... ಪರಲೋಕದಲ್ಲಿ ಜಯಶಾಲಿಗಳಾಗಬೇಕು... ಇಲ್ಲಿ ಅದೆಷ್ಟು ತ್ಯಾಗ ಸಹಿಸಿಯಾದರೂ ಆ ಜಯ ನಮಗೆ ಅನಿವಾರ್ಯವಾಗಿದೆ... ಇನ್ ಶಾ ಅಲ್ಲಾಹ್... ಇಂದಿನಿಂದ ನನ್ನ ಜೀವನ ಅಲ್ಲಾಹನ ಆಜ್ಞೆಗಳನ್ನು ಪಾಲಿಸುವ ಅರ್ಥಾತ್ ದಾಸನ ರೀತಿಯಲ್ಲಾಗಿರುತ್ತದೆ... ಅಲ್ಲಾಹು ನಮ್ಮೆಲ್ಲರನ್ನು ಸಜ್ಜನರಲ್ಲಿ ಸೇರಿಸಲಿ... ಆಮೀನ್.

Comments