ಇಸ್ತಿಗ್ಫಾರಿನ ಶಕ್ತಿ

ರಾತ್ರಿ ತುಂಬಾ ತಾಳಿದೆ. ಎಲ್ಲೆಲ್ಲೂ ಇರುಳು ಹಬ್ಬಿದೆ. ಪರಿಚಯವಿಲ್ಲದ ಪರಿಸರ... ಒಬ್ಬಂಟಿಯಾಗಿ ಹೊರಟ ಆ ಯಾತ್ರಾ ಮಧ್ಯೆ ಇಮಾಂ ಅಹ್ಮದ್ ಬ್ನ್ ಹಂಬಲ್ (ರ) ಅಲ್ಲಿದ್ದ ಮಸೀದಿಯೊಂದರಲ್ಲಿ ಅಭಯಕ್ಕಾಗಿ ಪ್ರವೇಶಿಸಲು ಮುಂದಾದರು. ಮಸೀದಿಗೆ ಪ್ರವೇಶಿಸಲು ಅಣಿಯಾದಾಗ ಕಾವಲುಗಾರ "ಇಲ್ಲಿ ಮಲಗಲು ಅನುವಾದವಿಲ್ಲ" ಎಂದು ಎಚ್ಚರಿಸಿದನು. ಅವನಿಗೆ ತಿಳಿದಿಲ್ಲ ತನ್ನೆದುರು ಇರುವುದು ಇಮಾಂ ಅಹ್ಮದ್ ಬ್ನ್ ಹಂಬಲ್ ರವರೆಂದು. "ಆಗಲಿ, ಆದರೆ ನಾನೀ ನಿಂತಿರುವ ಸ್ಥಳದಲ್ಲೇ ಮಲಗಲೇ.., ಒಳಗೆ ಪ್ರವೇಶಿಸಲ್ಲ" ಮಹಾನರು ಹೇಳಿದರು. ಆದರೂ ಕಾವಲುಗಾರ ಅವರನ್ನು ಬಿಡಲಿಲ್ಲ. ಕಾಣಲು ವೃದ್ಧರೂ ಪರದೇಶಿಯೂ ಆಗಿದ್ದ ಅಹ್ಮದ್ ಬ್ನ್ ಹಂಬಲ್ (ರ) ರನ್ನು ಆ ಕಾವಲುಗಾರ ಹಿಡಿದೆಳೆದು ಹೊರಹಾಕಿದರು. ಒಬ್ಬ ಪಾಪ ಫಖೀರನ್ನು ಹಿಡಿದು ಹೊರಹಾಕುತ್ತಿದ್ದನ್ನು ಗಮನಿಸಿದ ಅಲ್ಲಿದ್ದ ರೊಟ್ಟಿ ವ್ಯಾಪಾರಿ ಅವರನ್ನು ತನ್ನ ಮನೆಗೆ ಆಹ್ವಾನಿಸಿದರು. "ಇಂದು ತಾವು ನನ್ನ ಮನೆಯಲ್ಲಿ ತಂಗಿರಿ" ಎಂದು ಹೇಳಿದಾಗ ಇಮಾಮರು ಅವರ ಜೊತೆಗೆ ಮನೆಗೆ ಹೋದರು. ತನ್ನ ಮನೆಯ ಒಂದು ಕೋಣೆಯಲ್ಲಿ ಮಲಗಲು ಎಲ್ಲಾ ಸೌಕರ್ಯಗಳನ್ನು ಮಾಡಿದ ನಂತರ ರೊಟ್ಟಿವ್ಯಾಪಾರಿ ಅಡುಗೆಕೋಣೆಯತ್ತ ಹೋದರು. "ನಾಳೆಗಿರುವ ರೊಟ್ಟಿ ತಯ್ಯಾರಿಸಬೇಕು." ಸುಬ್ಹಿ ತನಕ ಅವರ ಕೆಲಸ ಇದೇ ಆಗಿದೆ. ಇಮಾಮರು ಮಲಗಲು ಅಣಿಯಾದರು. ಆಗಲೂ ವ್ಯಾಪಾರಿ ರೊಟ್ಟಿ ಮಾಡುವುದರಲ್ಲಿ ನಿರತನಾಗಿದ್ದರು. ಗಮನಿಸಿದಾಗ ರೊಟ್ಟಿ ತಯ್ಯಾರಿಸುತ್ತಿರುವಂತೆ ಅವರು ಇಸ್ತಿಗ್ಫಾರಿನ ದ್ಸಿಕ್ರುಗಳು ಹೇಳುತ್ತಿರುವುದು ಕೇಳಿತು. ತುಂಬಾ ಸಮಯದಿಂದ ಇದನ್ನು ಕೇಳುತ್ತಿದ್ದ ಇಮಾಮರು ಕೊನೆಗೆ ನಿದ್ದೆಗೆ ಜಾರಿದರು. ಬೆಳಗಾಯಿತು. ಹೊರಡುವ ಮುನ್ನ ಮಹಾನರು ರೊಟ್ಟಿವ್ಯಾಪಾರಿಯಲ್ಲಿ ಕೇಳಿದರು. "ನೀವು ಯಾಕಾಗಿ ನಿನ್ನೆ ರಾತ್ರಿ ಬೆಳಗಾಗುವ ತನಕ ಇಸ್ತಿಗ್ಪಾರ್ ಹೇಳುತ್ತಿದ್ದದ್ದು. ಅಷ್ಟು ದೊಡ್ಡ ಪಾಪ ತಾವು ಮಾಡಿದ್ದೀರೇ..?" "ಹೇ... ಹಾಗೇನಲ್ಲ. ನಾನು ಯಾವತ್ತೂ ಹೀಗೇನೇ... ಧಾನ್ಯದಿಂದ ರೊಟ್ಟಿ ತಯ್ಯಾರಿಸುವಾಗ ನಾನು ಇಸ್ತಿಗ್ಫಾರ್ ಹೇಳುತ್ತಿರುತ್ತೇನೆ. " "ಈ ಹೇಳುತ್ತಿರುವ ಇಸ್ತಿಗ್ಪಾರಿನಿಂದ ಏನಾದರೂ ಫಲ ತಾವು ಕಂಡಿದ್ದೀರೇ..?" ಕುತೂಹಲದಿಂದ ಇಮಾಮರು ಕೇಳಿದರು. "ಹೌದು, ಅಲ್ಲಾಹನಾಣೇ... ನಾನು ಇದುವರೆಗೂ ಮಾಡಿದ ಎಲ್ಲಾ ದುಆಗಳಿಗೆ ಅಲ್ಲಾಹನು ಉತ್ತರ ನೀಡಿದ್ದಾನೆ. ಆದರೆ ಒಂದು ದುಆ ಬಿಟ್ಟು...!" "ಅದೇನು ಇಷ್ಟು ದಿನವಾಗಿಯೂ ಉತ್ತರ ಲಭಿಸದ ಆ ದುಆ?" "ಒಬ್ಬ ಬಡವನಾದ ರೊಟ್ಟಿ ವ್ಯಾಪಾರಿಯಾದ ನನಗೆ ಮಹಾನರಾದ ಇಮಾಂ ಅಹ್ಮದ್ ಬ್ನ್ ಹಂಬಲ್ (ರ) ರನ್ನೊಮ್ಮೆ ನೋಡಬೇಕು. ಅದಿದುವರೆಗೂ ಸಾಧ್ಯವಾಗಿಲ್ಲ." ಕೇಳಿದ್ದು ವಿಶ್ವಾಸವಾಗದೆ ಇಮಾಮರು ಹೇಳಿದರು. "ನಾನಾಗಿದ್ದೇನೆ ಅಹ್ಮದ್ ಬ್ನ್ ಹಂಬಲ್. ನಿನ್ನ ಇಸ್ತಿಗ್ಫಾರಿನ ಶಕ್ತಿಯಾಗಿದೆ ನನ್ನನ್ನು ನಿನ್ನ ಮನೆಯ ಕಡೆಗೆ ಹಿಡಿದು ತಂದದ್ದು" ***************************** ನೋಡಿರಿ, ಮನಸ್ಸು ಮಾಡಿ أسغفر الله ಎಂದು ನಾವು ಹೇಳಿದ್ದೇವೇ? ಅಷ್ಟಕ್ಕೂ ಪಾಪಗಳೇನೂ ಮಾಡದ ಕಾರಣವೇ? ಜೀವನದಲ್ಲಿ ಪಾಪವೆಂದರೇನೆಂದೂ ತಿಳಿಯದ, ತನ್ನ ಪೂರ್ವವೂ ಭವಿಷ್ಯದ್ದೂ ಆದ ಎಲ್ಲಾ ಪಾಪಗಳನ್ನು ಮನ್ನಿಸಲಾಗಿದೆಯೆಂದು ತಿಳಿದೂ ದಿನನಿತ್ಯ ಕನಿಷ್ಟ 100 ಸಲ ಪುಣ್ಯ ಪ್ರವಾದಿ (ಸ) ಇಸ್ತಿಗ್ಫಾರ್ ಹೇಳಿಲ್ಲವೇ... ಹಸನುಲ್ ಬಸರಿ (ರ) ಹೇಳುತ್ತಾರೆ. "ಇಸ್ತಿಗ್ಫಾರ್ ಹೇಳುವವರನ್ನು ಅಲ್ಲಾಹು ಶಿಕ್ಷಿಸುವುದಿಲ್ಲ..." "ಅದು ಹೇಗೆ..? " ಎಂದು ಕೇಳಿದವರಲ್ಲಿ "ಇಸ್ತಿಗ್ಫಾರ್ ಕೇಳಲು ಮನಸ್ಸು ಮಾಡಿಸಿದ ಅಲ್ಲಾಹು ಮತ್ತೆ ಹೇಗೆ ಅವನನ್ನು ಶಿಕ್ಷಿಸುವನು..?" *(وَمَا كَانَ ٱللَّهُ مُعَذِّبَهُمْ وَهُمْ يَسْتَغْفِرُونَ)* "ಅವರು ಕ್ಷಮಾಯಾಚನೆ ಮಾಡುತ್ತಿರುವಾಗ ಅಲ್ಲಾಹು ಅವರನ್ನು ಶಿಕ್ಷಿಸಲಾರ." (ಸೂ. ಅನ್ಪಾಲ್ 33) ಪಾಪಗಳಿಂದ ಇರುಳುಕೂಡಿದ ನಮ್ಮ ಹೃದಯಗಳನ್ನು ಇಸ್ತಿಗ್ಫಾರ್ ಹಾಗೂ ಸ್ವಲಾತುಗಳಿಂದ ಸ್ವಚ್ಛಗೊಳಿಸಿದ ನಂತರವಲ್ಲದೆ ನಮ್ಮನ್ನು ನಿನ್ನೆಡೆಗೆ ಕರೆದೊಯ್ಯದಿರು ಅಲ್ಲಾಹ್..... ಅಲ್ಲಾಹನೇ ನಮ್ಮ ಪಾಪಗಳನ್ನು ಮನ್ನಿಸು... ನಮ್ಮ ಸದುದ್ದೇಶಗಳನ್ನು ನೆರವೇರಿಸು... ಆಮೀನ್

Comments