ಇದು ಸ್ವಯಂ ಅವಲೋಕನದ ಕಾಲ

ಅಲ್ಲಾಹನು ಮನುಷ್ಯನನ್ನು ಇತರೆಲ್ಲಾ ಜೀವಿಗಳಿಗಿಂತ ವಿಶೇಷ ಸ್ಥಾನ ನೀಡಿ ಗೌರವಿಸಿದ್ದಾನೆ... ತನಗೆ ಎಲ್ಲಾ ಸೌಭಾಗ್ಯಗಳನ್ನು ನೀಡಿದ ಸೃಷ್ಟಿಕರ್ತನೊಂದಿಗೆ ಮನುಷ್ಯನಿಗೆ ಕೆಲವು ಬಾಧ್ಯತೆಗಳಿವೆ. ಸಂತೋಷದಲ್ಲೂ ಸಂತಾಪದಲ್ಲೂ ಅಲ್ಲಾಹನ ನೆನಪು ಅವನಲ್ಲಿರಬೇಕು... ಆದರೆ, ಮನುಷ್ಯನು ಸೃಷ್ಟಿಕರ್ತನನ್ನು ಮರೆತಾಗ ಅಲ್ಲಾಹನೂ ಮನುಷ್ಯನಿಗೆ ನೀಡಿದ ಅನುಗ್ರಹಗಳನ್ನು ಒಂದೊಂದಾಗಿ ಹಿಂಪಡೆಯುತ್ತಿದ್ದಾನೆ. ಮಾರಕ ರೋಗಗಳನ್ನು ನೀಡಿ ಮನುಷ್ಯನನ್ನು ಪರೀಕ್ಷಿಸುತ್ತಿದ್ದಾನೆ... ಭೂಮಿಯಲ್ಲಿನ ಸರ್ವವನ್ನೂ ತಮ್ಮದಾಗಿಸಿಕೊಂಡಿದ್ದೇವೆಯೆಂದು ಅಹಂಕರಿಸುತ್ತಿದ್ದ ಸೂಪರ್ ಪವರ್ ದೇಶಗಳೂ ಅತಿ ಸೂಕ್ಷ್ಮ ವೈರಾಣುವಿನೆದುರು ನಿಸ್ಸಹಾಯತೆಯಿಂದ ಕೊರಗುತಿದೆ. ಮಸೀದಿಗಳು, ಮದ್ರಸಾಗಳು, ವಿದ್ಯಾಲಯಗಳು ಮುಚ್ಚುಗಡೆಯಾಗಿದೆ. ಇನ್ನಾದರೂ ನಾವು ಗಂಭೀರವಾಗಿ ಸ್ವಯಂ ಅವಲೋಕನೆ ಮಾಡಬೇಕಾಗಿದೆ. ಬಹುಷ, ನಮಗೆ ಅಲ್ಲಾಹನು ಸ್ವಯಂ ಅವಲೋಕನೆಗೆಂದೇ ನೀಡಿದ ಸಂಧರ್ಭವೂ ಆಗಿರಬಹುದು ಇದು. ನನಗೆ ಎಷ್ಟು ವಯಸ್ಸಾಯಿತು...? 20,30,40,50... ಹೀಗೆಲ್ಲಾ ಆಗಿರಬಹುದು ನಮ್ಮ ಉತ್ತರ... ಎಷ್ಟು ವರ್ಷ ನಾನು ಜೀವಿಸುವೆನು... ಅದು ಹೇಳಲು ಅಸಾಧ್ಯ... ಮರಣ ಹೊಂದುವೆವು... ಅದು ಖಚಿತ... ಮರಣ ಹೊಂದಿದರೆ ನಂತರ ಖಬರಾಗಿದೆ... ಮತ್ತೆ ಏಕಾಂಗಿತನ... ಇರುಳು... ಮರಣಕ್ಕೂ ಮುಂಚ ಮಾಡಿಟ್ಟ ಕರ್ಮಗಳಾಗಿದೆ ನನ್ನ ಖಬರಿನ ಜೊತೆಗಾರರು... ನನಗೆ ಜೊತೆಯಾಗಿ ಖುರ್ ಆನ್ ಇರಬಹುದೇ? ಸ್ವಲಾತುಗಳಿರಬಹುದೇ? ನಮಾಝುಗಳಿರಬಹುದೇ? ತಸ್ಬೀಹುಗಳಿರಬಹುದೇ? ತಹ್ಲೀಲುಗಳಿರಬಹುದೇ? ಇಸ್ತಿಗ್ಫಾರುಗಳಿರಬಹುದೇ? ಅದಲ್ಲ, ನನ್ನ ಜೊತೆಗಾರರು ಕೆಡುಕಿನತ್ತ ನೋಡಿದ ನೋಟಗಳಾಗಬಹುದೇ? ನಡೆತಗಳಾಗಬಹುದೇ? ಮಾತುಗಳಾಗಬಹುದೇ? ಕೆಡುಕುಗಳಿಂದ ನನಗೂ ಮೋಕ್ಷ ಬೇಕು... ನನ್ನ ರಬ್ಬ್ ನನ್ನನ್ನು ಸ್ವೀಕರಿಸಲು ಯಾವಾಗಲೂ ತಯ್ಯಾರಾಗಿದ್ದಾನೆ... ಆದರೆ.... ನಾನು ನನ್ನ ರಬ್ಬನ್ನು ಸ್ವೀಕರಿಸಲು ತಯ್ಯಾರಾಗುತ್ತಿಲ್ಲ... ಹೀಗೆಲ್ಲಾ ಆಗಿದೆ ನನ್ನ ಜೀವನ... ನನಗೆ ಬದಲಾಗಲು ಸಾಧ್ಯ... ನನ್ನ ಪಾಪಗಳು ಎಷ್ಟಿದ್ದರೂ ನನ್ನ ರಬ್ಬಿನ ಕಾರುಣ್ಯ ಅದಕ್ಕೂ ಮಿಗಿಲಾದದ್ದು... ಇಂದಿನಿಂದ أستغفر الله العظيم ಎಂದು ಹೇಳಿ ಪಾಪ ಮೋಕ್ಷ ಪಡೆಯುವೆನು... ಈ ಬಿಡುವು ಸಮಯ ನನಗೆ ಒಳಿತುಗಳನ್ನು ವೃದ್ಧಿಗೊಳಿಸಲು ಉಪಯೋಗಿಸಬೇಕು... ಇನ್ನು, ಹೀಗೊಂದು ಸಂಧರ್ಭ ನಮಗಿರಬಹುದೇ ಎಂದು ಗೊತ್ತಿಲ್ಲ... ಈಗ ಅಲ್ಲದಿದ್ದರೆ ಮತ್ತೆ ಯಾವಾಗ ಇನ್ನು ನಮಗೆ ಸಮಯ ಸಿಕ್ಕೀತು? ಒಂದು ವೇಳೆ ಇದ್ದಕ್ಕಿದ್ದಂತೆ ಮರಣದ ಮಲಕ್ ಅಝ್ರಾಈಲ್ (ಅ) ರವರು ಬಂದರೆ ಗತಿ? ಯಾ ಅಲ್ಲಾಹ್ ನಮ್ಮ ಆಖಿಬತ್ ನೀನು ಹಸನಾಗಿಸು... ಆಮೀನ್ 🤲🏻

Comments